ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

Wisdom we live by

ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಬುಡೋಳಿ-ಗಡಿಯಾರ ಪ್ರದೇಶದಲ್ಲಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ದಿನವನ್ನು ಬಹಳ ಸಂಭ್ರಮವಾಗಿ ಆಚರಿಸಲಾಯಿತು.

ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಇದು, NH-275 ರಾಷ್ಟ್ರೀಯ ಹೆದ್ದಾರಿಯಾಗಲಿರುವ, ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಿಂದ, ಕವಲೊಡೆದು ಸಾಗುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೆರಡು ಕಿ. ಮೀ. ಕ್ರಮಿಸಿದರೆ ಸಿಗುವುದು. ಇದು, ಈ ಹಿಂದಿನ ಪ್ರಚಲಿತ NH-48 ರಲ್ಲಿ ಅಂದರೆ ಈಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ NH-75 ರ ಗಡಿಯಾರ ಎಂಬ ಪರಿಸರದಲ್ಲಿ ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿಗೆ) ಕಣ್ಣೆಟುಕುವ ಅನತಿ ದೂರದಲ್ಲಿದ್ದು, ವಾಹನಗಳ ಶಬ್ದ ಮಾಲಿನ್ಯಗಳಿಂದಲೂ ಮುಕ್ತಗೊಳ್ಳುವಷ್ಟು ಅಗತ್ಯದ ಅಂತರವನ್ನು ಕಾಯ್ದುಕೊಂಡಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಕಡೇಶಿವಾಲಯ ಸಾಗುವ ರಸ್ತೆಯ ಸುಂದರ, ರಮಣೀಯ ಹಸಿರು ಪ್ರಕೃತಿಯ ಮಡಿಲಲ್ಲಿ ಅಸ್ತಿತ್ವ ಹೊಂದಿರುವ ಈ ವಿದ್ಯಾ ಸಂಸ್ಥೆಯು ಹಿಂದೂ ಮುಸ್ಲಿಮರ ಐಕ್ಯ ಹಾಗೂ ಸಂಗಮ ಭೂಮಿ ಎನ್ನಬಹುದಾದ ಹಿಂದೂ ಧರ್ಮದ ಶೃದ್ಧಾಕೇಂದ್ರ ಶ್ರೀ ಕ್ಷೇತ್ರ ಕಡೇಶಿವಾಲಯ ಹಾಗೂ ಅಲ್ಲಿಂದ ಕಾಣಲಾಗುವ ಮತ್ತು ಹೊಳೆ ದಾಟಿದರೆ ಸಂದರ್ಶಿಸಬಹುದಾಗಿರುವ, ಅಜಿಲಮೊಗರು ಬಾಬಾ ಫಕ್ರುದ್ದೀನ್ ದರ್ಗಾ ಇದ್ದು, ಇಲ್ಲಿನ ಸೂಫಿವರ್ಯರ ಹೆಸರಿನ ಉರೂಸ್ ಮಾಲಿದ ಎಂಬ ಹೆಸರಿನಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಇದು ಕೂಡ, ಹಿಂದೂ-ಮುಸ್ಲಿಮ್ ಜನಾಕರ್ಷಣೆಯ ಕೇಂದ್ರವಾಗಿದೆ.

ಇಷ್ಟೊಂದು ಸೊಗಸಾದ, ಸೌಹಾರ್ದ ಸಾಮರಸ್ಯ ಸಾರುವ, ಪ್ರದೇಶಗಳ ಮಧ್ಯೆ ಸ್ಥಾನ ಪಡೆದಿರುವ ಈ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ ಪ್ರಾದೇಶಿಕವಾಗಿರುವ ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳಲ್ಲಿರುವ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ತಮ್ಮ ಆಂಗ್ಲ ಮಾಧ್ಯಮದ ಜತೆಗೆ ಕನ್ನಡ ಭಾಷೆಯಲ್ಲಿ ಕೂಡಾ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದು ಅದಕ್ಕೆ ಪೂರಕವಾಗಿ ಕನ್ನಡ ರಾಜ್ಯೋತ್ಸವವನ್ನು ಇಲ್ಲಿನ ಮಕ್ಕಳು ಕನ್ನಡದ ವೈವಿಧ್ಯಮಯ ಸಾಹಿತ್ಯ, ಸಂಗೀತ, ಭಾಷಣ, ಪ್ರಾರ್ಥನೆ ಮತ್ತು ಕವನ ವಾಚನದ ಮೂಲಕ ಬಹಳ ಕಲಾತ್ಮಕವಾಗಿ ಆಚರಿಸಿಕೊಂಡರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ರವರು ಸಸಿಗೆ ನೀರೆರೆಯುವುದರೊಂದಿಗೆ ಇದನ್ನು ಸಾಂಕೇತಿಕವಾಗಿ ಉದ್ಘಾಟಿಸಿ, ಕನ್ನಡ ಭಾಷೆಯ ಇತಿಹಾಸ ಹಾಗೂ ಭಾಷಾ ಸಿರಿತನವನ್ನು ವಿವರಿಸುತ್ತಾ ನಮ್ಮ ಕನ್ನಡ ನಾಡಿನ ಸಂಸ್ಕೃತಿಯ ಭಾವನಾತ್ಮಕ ಹಾಗೂ ಕನ್ನಡ ಭಾಷೆಯ ಸೊಬಗಿನ ಆಂತರ್ಯವನ್ನು ಹೊರ ಹೊಮ್ಮಿಸಲು ಆಂಗ್ಲ ಸೇರಿದಂತೆ ಇನ್ನಾವ ಭಾಷೆಗೂ ಅಸಾಧ್ಯ ಅಲ್ಲಿನ ವ್ಯಾಕರಣ, ಛಂದಸ್ಸು, ಪ್ರಾಸ, ಸಂಧಿಗಳು ಹೀಗೆ ಹಲವಾರು ವೈವಿಧ್ಯಮಯ ಸಾಹಿತ್ಯ ರಚನೆಗಳ ಭಾವಗಳನ್ನು ಇತರ ಭಾಷೆಯಲ್ಲಿ ಮೂಡಿಸಲಾಗದು ಹೀಗೆ ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎಂದು ಹೇಳಿದರು ತಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ವಿದ್ಯಾರ್ಥಿಗಳ ಕನ್ನಡದಲ್ಲಿನ ಇಷ್ಟೊಂದು ಆಸಕ್ತಿ ಈ ರಾಜ್ಯೋತ್ಸವದಲ್ಲಿ ಹೊರಹೊಮ್ಮಿದೆ ಎಂದು ತಮ್ಮ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಶಿಕ್ಷಕಿ ಶ್ರೀಮತಿ ಆಮಿನಾ ಬಾನು ಹಾಗೂ ಅವರ ಸಹಾಯಕ ಶಿಕ್ಷಕಿ ಶ್ರೀಮತಿ, ಅಲಿಮತ್ ಸಅದಿಯಾ ಅವರು ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭ ಕೋರಿದರು. ಆರಂಭದಲ್ಲಿ, ಕನ್ನಡ ಶಿಕ್ಷಕಿ ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು ಕೊನೆಯಲ್ಲಿ, ಶಿಕ್ಷಕಿ ಕುಮಾರಿ ಸಮ್ರೀನಾ ಧನ್ಯವಾದವಿತ್ತರು ಹಾಗೂ ಶಿಕ್ಷಕಿಯವರಾದ ಶ್ರೀಮತಿ ಮುಬೀನಾರವರು ಈ ಕಾರ್ಯಕ್ರಮವನ್ನು ನಿರೂಪಿಸಿದರು.

Latest Posts

Best KINDERGARTEN Theme

All Demos Included

With Kindergarten WordPress Theme you will have everything you need to create a memorable and enchanting online presence. Start create your dream education site today.

Our team delivers reliable solutions tailored to your specific needs. We prioritize quality and customer satisfaction in every project.

Address :

Info :