ಬುಡೋಳಿ : ವಿಸ್ಡಮ್ ಇಂಗ್ಲಿಷ್ ಮೀಡಿಯಂ ಶಾಲೆಗೆ ಕೆಎಸ್ಇಎಬಿ ವತಿಯಿಂದ ಪ್ರತಿಷ್ಠಿತ ಎ ಗ್ರೇಡ್
ಬಂಟ್ವಾಳ : ಮಾಣಿ ಸಮೀಪದ ಬುಡೋಳಿ ವಿಸ್ಟಮ್ ಇಂಗ್ಲಿಷ್ ಮೀಡಿಯಂ ಶಾಲೆಯು 2025-26 ಶೈಕ್ಷಣಿಕ ವರ್ಷಕ್ಕಾಗಿ ಶೈಕ್ಷಣಿಕ ಸಾಧನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ವತಿಯಿಂದ ಅಧಿಕೃತವಾಗಿ 'ಎ' ಗ್ರೇಡ್ ಪ್ರದಾನ ಮಾಡಲಾಗಿದೆ.
ಈ ಗೌರವವು ಸಂಸ್ಥೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಸಾಧಿಸಿದ ಹಿನ್ನೆಲೆಯಲ್ಲಿ ಲಭಿಸಿದೆ. ಈ 'ಎ' ಗ್ರೇಡ್ ಪ್ರಮಾಣ ಪತ್ರವನ್ನು 85 ರಷ್ಟು ಉನ್ನತ ಗುಣಮಟ್ಟದ ತೂಕಾಂಶ ಶೇಕಡಾವಾರು ಆಧಾರದಲ್ಲಿ ನೀಡಲಾ ಗಿದೆ. ಇದು ಮಂಡಳಿ ಶಾಲೆಗಳ ಒಟ್ಟು ಶಿಕ್ಷಣ ಮಟ್ಟ ಮತ್ತು ಸಂಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಬಳಸುವ ಪ್ರಮುಖ ಮಾನದಂಡವಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳ ಪೈಕಿ ಮೂವರು ಡಿಸ್ಟಿಂಕ್ಷನ್,7 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯಲ್ಲಿ ಹಾಜಿರಾ ಸುಹೈದಾ 600 ಅಂಕಗಳು (96%) ಪ್ರಥಮ, ಮುರ್ಷಿದಾ ಕೆ 583 ಅಂಕಗಳು (94%) ದ್ವಿತೀಯ, ಫಾತಿಮಾ ರಿಂಶಾ 563 ಅಂಕ ಪಡೆದಿದ್ದಾರೆ.


